Chief Editor
Manohar. R (Manu)
Photo Journalist
chitrataramanu@gmail.com
+91 9845549026
ಈವಾರ ತೆರೆಗೆ ಹೈಡ್ ಅಂಡ್ ಸೀಕ್
Posted date: 12 Tue, Mar 2024 11:23:35 AM
ಪುನೀತ್ ನಾಗರಾಜು ಅವರ ನಿರ್ದೇಶನದ,   ಅನೂಪ್ ರೇವಣ್ಣ ನಟಿಸಿರುವ ಹೈಡ್ ಅಂಡ್ ಸೀಕ್ ಚಿತ್ರ ಈವಾರ ರಾಜ್ಯಾದ್ಯಂತ  ಬಿಡುಗಡೆಯಾಗುತ್ತಿದೆ. ಸುನೇರಿ ಆರ್ಟ್ ಕ್ರಿಯೇಶನ್ಸ್ ಮೂಲಕ ವಸಂತ್ ಎಂ.ಕುಲಕರ್ಣಿ ಹಾಗೂ ಪುನೀತ್ ನಾಗರಾಜು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 

ಈ ಚಿತ್ರದಲ್ಲಿ ನಾಯಕ ಅನೂಪ್ ರೇವಣ್ಣ ಅವರೇ  ಕಿಡ್ನಾಪರ್. ನೆಗೆಟಿವ್ ಶೇಡ್ ಹೀರೋ ಪಾತ್ರ ಅವರದು.  ಓಬ್ಬ ಬ್ಯುಸಿನೆಸ್ ಮಗಳ ಅಪಹರಣದ ಸುತ್ತ ನಡೆಯುವ  ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ  ಈ ಚಿತ್ರದಲ್ಲಿದ್ದು, ಬೆಂಗಳೂರು, ಮಾಗಡಿ, ಚಿಕ್ಕಮಗಳೂರು ಸುತ್ತಮುತ್ತ ೩೦ ದಿನಗಳ ಕಾಲ ಚಿತ್ರೀಕರಿಸಲಾಗಿದೆ.  ಚಿತ್ರದಲ್ಲಿ ನಾಯಕಿ  ಧನ್ಯ ರಾಮ್‌ ಕುಮಾರ್ ಒಬ್ಬ ಬ್ಯುಸಿನೆಸ್‌ಮ್ಯಾನ್ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಫಸ್ಟ್ ಹಾಫ್ ಡೈರೆಕ್ಟರ್ ಪಾಯಿಂಟ್ ಆಫ್  ವ್ಯೂನಲ್ಲಿ ಚಿತ್ರಕಥೆ ನಡೆದರೆ, ಸೆಕೆಂಡ್ ಹಾಫ್ ನಲ್ಲಿ ಅದೇಸೀನ್ ಬೇರೊಂದು ಆ್ಯಂಗಲ್ ನಲ್ಲಿ  ನಡೆಯಲಿದೆ.  ರಿಯೋ ಪಿ.ಜಾನ್ ಅವರ ಛಾಯಾಗ್ರಹಣ, ಸ್ಯಾಂಡಿ ಅಡಾಂಕಿ ಅವರ ಸಂಗೀತ ಸಂಯೋಜನೆ, ಮಧು ತುಂಬಕೆರೆ ಅವರ ಸಂಕಲನ ಈ ಚಿತ್ರಕ್ಕಿದೆ. ಪ್ರಮುಖ ತಾರಾಗಣದಲ್ಲಿ ಮೈತ್ರಿ  ಜಗ್ಗಿ, ಸೂರಜ್, ಬಲ ರಾಜವಾಡಿ, ಕೃಷ್ಣ ಹೆಬ್ಬಾಳೆ, ರಾಜೇಶ್ ನಟರಂಗ, ಅರವಿಂದರಾವ್ ಮುಂತಾದವರಿದ್ದಾರೆ..
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಈವಾರ ತೆರೆಗೆ ಹೈಡ್ ಅಂಡ್ ಸೀಕ್ - Chitratara.com
Copyright 2009 chitratara.com Reproduction is forbidden unless authorized. All rights reserved.